ಮೊದಲಿಗೆ ಫ್ರೀ ಸಾಫ್ಟ್ವೇರ್ ಎಂದರೆ ಏನೆಂದು ಶುರು ಮಾಡೋಣ. ಫ್ರೀ ಸಾಫ್ಟ್ವೇರ್ ಎಂದರೆ, ನಕಲು ಮಾಡುವ, ಮೂಲ ತಂತ್ರಾಂಶದೊಂದಿಗೆ ವಿತರಿಸುವ, ಮಾರ್ಪಡಿಸುವ ಮತ್ತು ಹೊಸ ಕ್ಷೇತ್ರಕ್ಕೆ ಅನ್ವಯಿಸುವ ಎಲ್ಲ ಸ್ವಾತಂತ್ರ್ಯಗಳನ್ನು ಅದು ಬಳಕೆದಾರರಿಗೆ ನೀಡುತ್ತದೆ. ಆದರೆ, ಮಾಲೀಕತ್ವದ ಸಾಫ್ಟ್ ವೇರ್ ಮೂಲ ತಂತ್ರಾಂಶವನ್ನು (Proprietary software) ಬಳಕೆದಾರರಿಗೆ ನಿರಾಕರಿಸುವ ಮೂಲಕ ಎಲ್ಲ ಸ್ವಾತಂತ್ರ್ಯಗಳನ್ನು ಹತ್ತಿಕ್ಕುತ್ತವೆ.
2010 ನೆ ಮಾರ್ಚ್ 20 ಮತ್ತು 21 ರಂದು ಬೆಂಗಳೂರಿನಲ್ಲಿ ಜರುಗುವ ರಾಷ್ಟ್ರ ಮಟ್ಟದ
ಸ್ವತಂತ್ರ ತಂತ್ರಾಂಶ ಸಮ್ಮೇಳನ ಕ್ಕೆ ಆಹ್ವಾನ
ಫ್ರೀ ಸಾಫ್ಟ್ವೇರ್ ಅಥವಾ ಸ್ವತಂತ್ರ ತಂತ್ರಾಂಶ ಎಂದರೆ, ನಕಲು ಮಾಡುವ, ಮೂಲ ತಂತ್ರಾಂಶದೊಂದಿಗೆ ವಿತರಿಸುವ, ಮಾರ್ಪಡಿಸುವ ಮತ್ತು ಹೊಸ ಕ್ಷೇತ್ರಕ್ಕೆ ಅನ್ವಯಿಸುವ ಎಲ್ಲ ಸ್ವಾತಂತ್ರ್ಯಗಳನ್ನು ಅದು ಬಳಕೆದಾರರಿಗೆ ನೀಡುತ್ತದೆ. ಆದರೆ, ಮಾಲೀಕತ್ವದ ಸಾಫ್ಟ್ ವೇರ್ (Proprietary software) ಮೂಲ ತಂತ್ರಾಂಶವನ್ನು (Source Code) ಬಳಕೆದಾರರಿಗೆ ನಿರಾಕರಿಸುವ ಮೂಲಕ ಎಲ್ಲ ಸ್ವಾತಂತ್ರ್ಯಗಳನ್ನು ಹತ್ತಿಕ್ಕುತ್ತವೆ.